ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ “ವಿದ್ಯೆ ಪಡೆದು ಸ್ವತಂತ್ರರಾಗಿ, ಸಂಘಟನೆಯಿಂದ ಶಕ್ತರಾಗಿ” ಎಂಬ ಸಂದೇಶವನ್ನು ಅನುಸರಿಸಿ ಮಂಗಳೂರು ನಗರದ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘವು 1982ರಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜುಯನ್ನು ಸ್ಥಾಪಿಸಿದೆ. ಪದವಿ ಪೂರ್ವ ಕಾಲೇಜು ಸೇರಿದಂತೆ ಕಳೆದ 37 ವರ್ಷಗಳಿಂದ ಸಮಾಜಕ್ಕೆ ಆದರ್ಶವೆನಿಸಿದ ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. 2007 ರಲ್ಲಿ ಬಿ.ಎಡ್. ಶಿಕ್ಷಣ ಮಹಾ ವಿದ್ಯಾಲಯ ಸ್ಥಾಪಿತವಾಗಿ ಸಮಾಜದ ಏಳಿಗೆಗೆ ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಪ್ರಯತ್ನಶೀಲವಾಗಿ ನಡೆದು ಬಂದಿದೆ. 2011ರಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯ ವಿಭಾಗದ ಶಿಕ್ಷಣ ಆರಂಭವಾಗಿದೆ.

ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘವು ಬಡ ಶಾಲಾ ಮಕ್ಕಳಿಗೆ ಧರ್ಮಾರ್ಥ ಪುಸ್ತಕ ವಿತರಣೆ, ಉಚಿತ ವೈದ್ಯಕೀಯ ಸವಲತ್ತು, ಶಾಶ್ವತ ವಿದ್ಯಾ ನಿಧಿಯ ಸ್ಥಾಪನೆ ಇತ್ಯಾದಿ ಜನಹಿತ ಕಾರ್ಯಗಳನ್ನು ಮಾಡುತ್ತಿದೆ. ಭಾರತ ಸರಕಾರದ ಮಾಜಿ ಸಹಾಯಕ ವಿತ್ತ ಸಚಿವ ಸನ್ಮಾನ್ಯ ಶ್ರೀ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ, ಅವಕಾಶ ವಂಚಿತರಿಗಾಗಿ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಜಾತಿ ಮತಗಳ ಭೇದವಿಲ್ಲದೆ, ಕನಿಷ್ಠ ಅಂಕ ಪಡೆದವರಿಗೂ ಅವಕಾಶ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕನ್ನು ನೀಡಿದೆ.

ಕಾಲೇಜು ಆಡಳಿತ ಮಂಡಳಿ:

 1. ಶ್ರೀ ಎಮ್. ಸೀತಾರಾಮ್ - ಅಧ್ಯಕ್ಷರು
 2. ಶ್ರೀ ಎಸ್.ಜಯವಿಕ್ರಮ್ - ಸಂಚಾಲಕರು
 3. ಶ್ರೀ ಎಮ್. ಶೇಖರ್ ಪೂಜಾರಿ - ಸದಸ್ಯರು
 4. ಶ್ರೀ ಎಮ್. ಜಗನ್ನಾಥ್ - ಸದಸ್ಯರು
 5. ಶ್ರೀ ಬಿ. ಪಿ. ಹರೀಶ್ ಕುಮಾರ್ - ಸದಸ್ಯರು
 6. ಡಾ. ಬಿ. ಜಿ. ಸುವರ್ಣ- ಸದಸ್ಯರು
 7. ಶ್ರೀ ವಸಂತ ಕಾರಂದೂರ್ - ಸದಸ್ಯರು
 8. ಶ್ರೀ ಅರುಣ್ ಕುಮಾರ್ - ಸದಸ್ಯರು
 9. ಶ್ರೀ ಬಿ. ಪ್ರವೀಣ್ ಕುಮಾರ್ - ಸದಸ್ಯರು
 10. ಶ್ರೀ ಬಿ. ದೇವದಾಸ್ - ಸದಸ್ಯರು
 11. ಡಾ.ರೇಣುಕಾ ಕೆ., ಎಮ್.ಕಾಮ್ ಪಿಎಚ್.ಡಿ. - ಪ್ರಾಂಶುಪಾಲರು
 12. ಡಾ. ಸುಜಯ ಸುವರ್ಣ, ಎಮ್.ಎ ಪಿಎಚ್.ಡಿ.- ಬೋಧಕ ಪ್ರತಿನಿಧಿ
 13. ಶ್ರೀ ಲೋಕನಾಥ್ ಪೂಜಾರಿ, ಎಮ್.ಎ, ಎಮ್.ಲಿಬ್ ಎಮ್.ಫಿಲ್ - ಬೋಧಕ ಪ್ರತಿನಿಧಿ