ಲಭ್ಯವಿರುವ ತರಬೇತಿ (ಕೋರ್ಸು)ಗಳ ವಿವರ:

  1. ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು - ಬಿ.ಎ. / ಬಿ.ಕಾಂ.
  2. ಶ್ರೀ ಗೋಕರ್ಣನಾಥೇಶ್ವರ ಕಾಲೇಜು – - ಎಂ.ಕಾಂ.
  3. ಶ್ರೀ ಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜು - ಕಲಾ / ವಾಣಿಜ್ಯ / ವಿಜ್ಞಾನ
  4. ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಕಾಲೇಜು - ಬಿ.ಇಡಿ.

 

ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ, ಪದವಿ ಕೋರ್ಸಗಳ ವಿವರ:

  1. ಬಿ.ಎ. - ಇತಿಹಾಸ / ಅರ್ಥಶಾಸ್ತ್ರ/ ರಾಜಕೀಯ ವಿಜ್ಞಾನ
  2. ಬಿ.ಕಾಂ. - ವಾಣಿಜ್ಯ ವಿಷಯಗಳ ಜೊತೆಗೆ ಮಾನವ ಸಂಪನ್ಮೂಲ ನಿರ್ವಹಣೆ/ವ್ಯಾಪಾರ ತೆರಿಗೆ.

ಅರ್ಹತೆ:
ಅಭ್ಯರ್ಥಿಗಳು ಪದವಿ ಪೂರ್ವ ಪರೀಕ್ಷಾ ಮಂಡಳಿ / ಇತರೇ ಯಾವುದೇ ಸಮಾನ ಪರೀಕ್ಷೆ ನಡೆಸಿದ 2- ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಅಭ್ಯರ್ಥಿಯ ಸ್ವಂತ ಕೈ ಬರವಣಿಗೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳಿಗೆ ಸಂಬಂಧಿಸಿದಂತೆ ಅರ್ಜಿ ನಮೂನೆಗಳನ್ನು ಪೂರ್ಣವಾಗಿ ಭರ್ತಿ ಮಾಡಬೇಕು .ಅರ್ಜಿ ನಮೂನೆಗಳನ್ನು ದ್ವಿತೀಯ ಪಿಯುಸಿ ಫಲಿತಾಂಶದ ಪ್ರಕಟಣೆಯ 10 ದಿನಗಳಲ್ಲಿ ಕಾಲೇಜಿನ ಕಛೇರಿಯಲ್ಲಿ ನೋದಾಯಿಸಬೇಕು.

ನೋಂದಣಿ ಶುಲ್ಕ ರೂ. 50/- ಇದು ಯಾವುದೇ ಸಂದರ್ಭಗಳಲ್ಲಿ ಮರುಪಾವತಿ ಮಾಡಲಾಗುವುದಿಲ್ಲ.

ಸಂದರ್ಶನಕ್ಕೆ ಬರುವ ಅಭ್ಯರ್ಥಿ ಹೆತ್ತವರು / ಪೋಷಕರ ಜೊತೆ ಬರಬೇಕು. ವೈಯಕ್ತಿಕ ಸಂದರ್ಶನದ ನಂತರ ಪ್ರಾಂಶುಪಾಲರು ಅಭ್ಯರ್ಥಿಯ ಪ್ರವೇಶಾತಿ ಮಾಡುತ್ತಾರೆ.

ಅಭ್ಯರ್ತಿಗಳು ಈ ಕೆಳಗಿನ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು:

  1. ಪಿ.ಯು. ಸರ್ಟಿಫಿಕೇಟ್ / ಮಾಕ್ರ್ಸ್ ಕಾರ್ಡ್
  2. ವರ್ಗಾವಣೆ ಪ್ರಮಾಣ ಪತ್ರ
  3. ಹಿಂದಿನ ಸಂಸ್ಥೆಯಿಂದ ಪಡೆದ ನಡವಳಿಕೆಪ್ರಮಾಣ ಪತ್ರ
  4. ಗುರುತಿನ ಕಾರ್ಡಿಗಾಗಿ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸೇರ್ಪಡೆಗೊಳ್ಳಲು ಸೂಚನೆಯನ್ನು ಕಳುಹಿಸಲಾಗುವುದು.

ಸಂದರ್ಶನದ ನಂತರ ಆಯ್ಕೆಯಾದ ವಿದ್ಯಾರ್ಥಿಗಳು ತಕ್ಷಣ ಶುಲ್ಕ ಪಾವತಿ ಮಾಡಬೇಕು. ಯಾವುದೇ ಸಂದರ್ಭಗಳಲ್ಲಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.